ಅಭಿಪ್ರಾಯ / ಸಲಹೆಗಳು

ನಾಗರಿಕರ ಕರ್ತವ್ಯಗಳು

ನಾಗರೀಕರ ಕರ್ತವ್ಯಗಳು          

ಗದಗ ಜಿಲ್ಲಾ ಪೊಲೀಸ್ ಎಲ್ಲಾ ನಾಗರೀಕರಿಂದ ಸಹಾಯ ಮತ್ತು ಸಹಕಾರವನ್ನು ಪಡೆದು ಜಿಲ್ಲೆಯನ್ನು ಅಪರಾಧ-ಮುಕ್ತ ಮತ್ತು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಸೌಹಾರ್ದತೆಯನ್ನು ಬೆಳೆಸಿ ಶಾಂತಿಯುತ ಜೀವನ ನೆಲೆಸಲು ಪ್ರಯತ್ನಿಸುತ್ತದೆ. 

  1. ನಾವು ಬಯಸುವುದೇನೆಂದರೆ ಪ್ರತಿಯೊಬ್ಬ ನಾಗರೀಕರು ತಮ್ಮ ಸರಹದ್ದಿನ ಪೊಲೀಸ್ ಠಾಣೆ ಮತ್ತು ಅದರ ದೂರವಾಣಿ ಸಂಖ್ಯೆಯ ಮಾಹಿತಿ ಹೊಂದಿರಬೇಕು, ಮತ್ತು ಅವರು ಯಾವುದೇ ಅಪರಾಧದ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಅಥವಾ 100 ಸಂಖ್ಯೆ ಕರೆಯನ್ನು ಮಾಡಿ ತಿಳಿಸಿತಕ್ಕದ್ದು.
    1. ಭಯೋತ್ಪಾದನೆಯಂತಹ ಅಪರಾಧಗಳು
    2. ನಗರದ ಶಾಂತಿ ಮತ್ತು ಸುವ್ಯೆವಸ್ಥೆಗೆ ತೊಡಕಾಗುವ ಚಟುವಟಿಕೆಗಳು
    3. ಕೊಲೆ, ಭಾರಿ ಗಾಯ, ಅಪಹರಣ, ಇತ್ಯಾದಿಗಳಲ್ಲಿ ಭಾಗಿಯಾದವರ ಬಗ್ಗೆ ಮಾಹಿತಿ.
    4. ದರೋಡೆ, ಸುಲಿಗೆ, ಕಳ್ಳತನ, ಜಬರಿ ಮನೆ ಕಳವು, ಮುಂತಾದ ಸ್ವತ್ತಿನ ಅಪರಾದಗಳ ಬಗ್ಗೆ ಮಾಹಿತಿ.
    5. ನೆರೆಹೊರೆಯಲ್ಲಿ ನಾಗರೀಕರ ಸುರಕ್ಷತೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬಿರುವಂತಹ ಸಂಶಯಾಸ್ಪದ ಚಟುವಟಿಕೆಗಳು.
    6. ಭ್ರಷ್ಟಾಚಾರದ ಬಗ್ಗೆ ಮಾಹಿತಿ
    7. ಸರ್ಕಾರಿ ನೌಕರನಿಂದ ನಂಬಿಕೆದ್ರೋಹ ಅಪರಾಧ. (ಮಾಹಿತಿದಾರರ ಗೌಪ್ಯತೆಯನ್ನು ಕಾಪಾಡಲಾಗುವುದು)  
    8. ಆಹಾರ ಸಾಮಗ್ರಿಗಳ ಕಲಬೆರಕೆ ಮತ್ತು ನಕಲಿ ಔಷಧಗಳ ಬಗ್ಗೆ
  2. ಅಪಘಾತ ಸಮಯದಲ್ಲಿ ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ ಕೂಡಲೇ ಸಹಾಯಕ್ಕೆ ಆಗಮಿಸಿ ಗಾಯಾಳುಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು.
  3. ಪ್ರಮುಖ ಉತ್ಸವಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಪ್ರತಿಭಟನೆಗಳ ಸಮಯದಲ್ಲಿ ಪೊಲೀಸರು ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸುವುದು. ಸಂಚಾರಿ ನಿಯಮಗಳನ್ನು ಸಹ ಪಾಲನೆ ಮಾಡುವುದು.
  4. ನಾಗರೀಕರು ತನಿಖೆಯ ಸಮಯದಲ್ಲಿ ಶೋಧನೆ, ಜಪ್ತಿ, ಮಹಜರ ಮಾಡಲು ಸಹಕರಿಸಬೇಕು.
  5. ಅಪರಿಚಿತರನ್ನು ಮನೆಕೆಲಸಕ್ಕೆ ನೇಮಿಸಿ ಕೊಳ್ಳುವ ಮೊದಲು ಅವನ  ಪೂರ್ವ ಪರ ಚರಿತ್ರೆ ಪರಿಶೀಲನೆಗೆ ಕೊರಬೇಕು.
  6. ಅಪರಿಚಿತರಿಗೆ ಮನೆ ಬಾಡಿಗೆಯನ್ನು ಕೊಡುವ ಮುನ್ನ ಅವರ ಪೂರ್ವ ಪರವನ್ನು ತಿಳಿದುಕೊಳ್ಳತಕ್ಕದ್ದು.
  7. ನಾಗರಿಕರು ತಮ್ಮ ಅಕ್ಕ ಪಕ್ಕದಲ್ಲಿ ನಡೆಯುವ ಪ್ರಮುಖ ಬೆಳೆವಣಿಗೆಗಳ ಬಗ್ಗೆ ತಿಳಿಸಲು ಸ್ಥಳಿಯ ಬೀಟ ಪೊಲೀಸರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಬೇಕು.

ಇತ್ತೀಚಿನ ನವೀಕರಣ​ : 22-10-2020 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಗದಗ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080